Home » Karnataka Police Jobs » Karnataka 545 Civil PSI Recruitent 2020/ Police Sub Inspector Job Details and Notification pdf

ಕರ್ನಾಟಕ ರಾಜ್ಯ ಪೊಲೀಸ್

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್ಐ) ಹುದ್ದೆಗಳನ್ನು ಭರ್ತಿ ಮಾಡಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ದಿನಾಂಕ 22 ಫೆಬ್ರವರಿ 2021ರ ಒಳಗೆ ಅಧಿಕೃತ ವೆಬ್-ಸೈಟ್ ಪ್ರವೇಶಿಸಿ ಅರ್ಜಿ ಸಲ್ಲಿಸಬಹುದಾಗಿದೆ. ನೇಮಕಾತಿಯ ಕುರಿತ ಸಂಪೂರ್ಣಮಾಹಿತಿಯನ್ನು ಕೆಳಗೆ ನೀಡಲಾಗಿದೆ.

ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ನೇಮಕಾತಿ

ಹುದ್ದೆಯ ಹೆಸರು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್ಐ)
ಹುದ್ದೆಗಳ ಸಂಖ್ಯೆ 556 ಹುದ್ದೆಗಳು (545+11)
ವಿದ್ಯಾರ್ಹತೆ ಪದವಿ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 22 ಫೆಬ್ರವರಿ 2021

ಒಟ್ಟು 556 ಸಿವಿಲ್ ಪೊಲೀಸ್ ಸಬ್‌-ಇನ್ಸ್‌ಪೆಕ್ಟರ್ ಹುದ್ದೆಗಳನ್ನು ಭರ್ತಿಮಾಡಲು ಅರ್ಜಿ ಆಹ್ವಾನಿಸಲಾಗಿದ್ದು 
ಹುದ್ದೆಗಳ ವಿವರ ಈ ಕೆಳಗಿನಂತಿದೆ

ಮಿಕ್ಕುಳಿದ ವೃಂದ ಹುದ್ದೆಗಳು
ಹುದ್ದೆಗಳ ಸಂಖ್ಯೆ
ಕ್ರೀಡಾಪಟುಗಳಿಗೆ
1) ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಸಿವಿಲ್) (ಪುರುಷ)   282 06
2) ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಸಿವಿಲ್) (ಮಹಿಳೆ)   94 02
3) ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಸಿವಿಲ್) (ಪುರುಷ) (ಸೇವೆಯಲ್ಲಿರುವವರಿಗೆ) 47 01
4) ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಸಿವಿಲ್) (ಮಹಿಳೆ) (ಸೇವೆಯಲ್ಲಿರುವವರಿಗೆ) 15
ಒಟ್ಟು 438 09
 
ಕಲ್ಯಾಣ ಕರ್ನಾಟಕ ವೃಂದ ಹುದ್ದೆಗಳು
ಹುದ್ದೆಗಳ ಸಂಖ್ಯೆ
ಕ್ರೀಡಾಪಟುಗಳಿಗೆ
1) ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಸಿವಿಲ್) (ಪುರುಷ)   67 01
2) ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಸಿವಿಲ್) (ಮಹಿಳೆ)   25 01
3) ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಸಿವಿಲ್) (ಪುರುಷ) (ಸೇವೆಯಲ್ಲಿರುವವರಿಗೆ) 12
4) ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಸಿವಿಲ್) (ಮಹಿಳೆ) (ಸೇವೆಯಲ್ಲಿರುವವರಿಗೆ) 03
ಒಟ್ಟು 107 02

 

ವಿದ್ಯಾರ್ಹತೆ:- 
ಅರ್ಜಿ ಸಲ್ಲಿಸಲು ಯಾವುದೇ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು

ದೇಹದಾರ್ಢತೆ:
  i) ಎಲ್ಲಾ ನೇರ ಅಭ್ಯರ್ಥಿಗಳಿಗೆ, ಸೇವಾನಿರತ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಅನ್ವಯಿಸುವಂತೆ
 = ಎತ್ತರ : ಕನಿಷ್ಠ 180 ಸೆಂ. ಮೀ
 = ಎದೆ ಸುತ್ತಳತೆ : 86 ಸೆಂ.ಮೀ (ಪೂರ್ತಿ ವಿಸ್ತರಿಸಿದಾಗ) ಕನಿಷ್ಠ ವಿಸ್ತರಣೆ 5 ಸೇಂ.ಮೀ

ii) ಮಹಿಳಾ ಅಭ್ಯರ್ಥಿಗಳಿಗೆ ಅನ್ವಯಿಸುವಂತೆ 
 = ಎತ್ತರ : ಕನಿಷ್ಠ 157 ಸೆಂ.ಮೀ
 = ತೂಕ : ಕನಿಷ್ಠ 45 ಕೆ.ಜಿ

ವಯೋಮಿತಿ : –
 = ಕನಿಷ್ಟ 21 ವರ್ಷ ವಯಸ್ಸಾಗಿರಬೇಕು (ದಿನಾಂಕ 01-04-2020ರಂತೆ ಪರಿಗಣಿಸಲಾಗುವುದು)
 = ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ 32 ವರ್ಷಗಳು
 = ಇತರೆ ಅಭ್ಯರ್ಥಿಗಳಿಗೆ 30 ವರ್ಷಗಳು

ಅರ್ಜಿ ಶುಲ್ಕ :- 
*
ಸಾಮಾನ್ಯ ವರ್ಗ ಅಭ್ಯರ್ಥಿಗಳಿಗೆ ರೂಪಾಯಿ 500/-
* ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂಪಾಯಿ 500/-
* ಎಸ್‌ಸಿ / ಎಸ್‌ಟಿ / ಪ್ರವರ್ಗ-1ಕ್ಕೆ ಸೇರಿದ ಅಭ್ಯರ್ಥಿಗಳಿಗೆ ರೂ.250 

ಅರ್ಜಿ ಸಲ್ಲಿಸುವ ವಿಧಾನ : – 
 = ಆಸಕ್ತ ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್-ಸೈಟ್ http://psicivilnhk20.ksp-online.in ಪ್ರವೇಶಿಸಿ ಆನ್‌ಲೈನ್ ಮೂಲಕ  ಅರ್ಜಿ ಸಲ್ಲಿಸಬಹುದಾಗಿದೆ. 

ವೇತನ ಶ್ರೇಣಿ :-
= 37900-950-39800-1100-46400-1250-53900-1450-65600-1650-70850

ನೇಮಕಾತಿ ವಿಧಾನ : –
= ಸಹಿಷ್ಣುತೆ ಹಾಗೂ ದೇಹದಾಡ್ಯತೆ ಪರೀಕ್ಷೆ ನಡೆಸಲಾಗುತ್ತದೆ ಉತ್ತೀರ್ಣರಾದರೆ ನೇಮಕಾತಿಯ ಮುಂದಿನ ಹಂತವಾದ ಲಿಖಿತ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಅರ್ಹ ಅಭರ್ಥಿಗಳಿಗೆ ವೈದ್ಯಕೀಯ ಪರೀಕ್ಷೆ ನಡೆಸಿ ನೇಮಕಾತಿ ಪಟ್ಟಿ ತಯಾರಿಸಲಾಗುವುದು.

 

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ 22 ಜನವರಿ 2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 22 ಫೆಬ್ರವರಿ 2021
ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ 24 ಫೆಬ್ರವರಿ 2021

ಅರ್ಜಿ ಸಲ್ಲಿಸಲು : ಕ್ಲಿಕ್ಕಿಸಿ

ಅಧಿಸೂಚನೆ : ಕ್ಲಿಕ್ಕಿಸಿ

ವೆಬ್‌ಸೈಟ್ : ಕ್ಲಿಕ್ಕಿಸಿ

 

 

 

 

 

Leave a Reply

Your email address will not be published. Required fields are marked *

*
*