Home » Syllabus » Karnataka PSI Syllabus in Kannada pdf / Written Exam Paper Details in Kannada

ಕರ್ನಾಟಕ ರಾಜ್ಯ ಪೊಲೀಸ್ ನೇಮಕಾತಿ ಪರೀಕ್ಷೆ ಸಿಲೆಬಸ್

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳನ್ನು ವರ್ಷದಲ್ಲಿ ಹಲವಾರು ಭಾರಿ ನೇಮಕಾತಿ ಮಾಡಲಾಗುವುದು, ಸಿವಿಲ್ , ರಿಸರ್ವ್ , ಕೆಎಸ್‌ಆರ್‌ಪಿ / ಕೆಎಸ್‌ಐಎಸ್‌ಎಫ್ ಸಬ್ ಇನ್ಸ್‌ಪೆಕ್ಟರ್ ಹೀಗೆ ಇಲಾಖೆಗೆ ಅಗತ್ಯ ಸಿಬ್ಬಂದಿಗಳನ್ನು ಭರ್ತಿಮಾಡಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗುತ್ತದೆ ನಂತರ ನೇಮಕಾತಿಯ ಮೊದಲ ಹಂತವಾದ ದೈಹಿಕ ಪರೀಕ್ಷೆಯನ್ನು ನಡೆಸಲಾಗುವುದು ಅರ್ಹ ಅಭ್ಯರ್ಥಿಗಳಿಗೆ ನೇಮಕಾತಿಯ ಮುಂದಿನ ಹಂತವಾದ ಲಿಖಿತ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ನೇಮಕಾತಿ ಮಾಡಲಾಗುವುದು, ಈ ಹಿಂದೆ ಲಿಖಿತ ಪರೀಕ್ಷೆಯಲ್ಲಿ ಅರ್ಹ ಅಭ್ಯರ್ಥಿಗಳಿಗೆ ಸಂದರ್ಶನ ನಡೆಸಲಾಗುತ್ತಿತ್ತು ಆದರೆ ಇದೀಗ 2020ರ ನಂತರ ಸಂದರ್ಶನ ತೆಗೆದುಹಾಕಲಾಗಿದೆ, ಕೇವಲ ದೈಹಿಕ ಪರೀಕ್ಷೆ ಮತ್ತು ಲಿಖಿತ ಪರೀಕ್ಷೆ ನಡೆಸಿ ನೇಮಕಾತಿ ಮಾಡಲಾಗುತ್ತದೆ.

ಸಿವಿಲ್ , ರಿಸರ್ವ್ , ಕೆಎಸ್‌ಆರ್‌ಪಿ / ಕೆಎಸ್‌ಐಎಸ್‌ಎಫ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ಬೇರೆ ಬೇರೆ ಅಧಿಸೂಚನೆ ಹೊರಡಿಸಿ ನೇಮಕಾತಿ ಮಾಡಲಾಗದರೂ ಲಿಖಿತ ಸ್ಪರ್ಧಾತ್ಮಕ ಪರೀಕ್ಷೆ ಪಠ್ಯಕ್ರಮ ಒಂದೆ ರೀತಿಯಾಗಿರುವುದನ್ನು ನಾವು ಕಾಣಬಹುದಾಗಿದೆ.

ದೈಹಿಕ ಸಹಿಷ್ಣುತೆ ಪರೀಕ್ಷೆ ಮತ್ತು ದೇಹದಾರ್ಢ್ಯತೆ ಪರೀಕ್ಷೆಯಲ್ಲಿ ಅರ್ಹತೆಪಡೆದ ಅಭ್ಯರ್ಥಿಗಳನ್ನು ಮಾತ್ರ ಲಿಖಿತ ಪರೀಕ್ಷೆಗೆ ಕರೆಯಲಾಗುವುದು

 

ಸ್ಪರ್ಧತ್ಮಕ ಪರೀಕ್ಷೆ ಪಠ್ಯಕ್ರಮ
(Syllabus) 

ವಿಷಯ ಅಂಕಗಳು ಸಮಯ

ಪತ್ರಿಕೆ-1
ಪ್ರಬಂಧ/ಸಾರಾಂಶ ಬರಹ

50 ಅಂಕಗಳು

ಒಂದು ಗಂಟೆ ಮೂವತ್ತು ನಿಮಿಷ

ಪತ್ರಿಕೆ-2
ಸಾಮಾನ್ಯ ಜ್ಞಾನ
ಬಹುಆಯ್ಕೆ ಪ್ರಶ್ನೆ ಪತ್ರಿಕೆ

150 ಅಂಕಗಳು

ಒಂದು ಗಂಟೆ ಮೂವತ್ತು ನಿಮಿಷ

ಒಟ್ಟು 200 ಅಂಕಗಳು  

ಪತ್ರಿಕೆ-1
ಪ್ರಬಂಧ/ಸಾರಾಂಶ ಬರಹ
ಪತ್ರಿಕೆ-1 ಪ್ರಶ್ನೆಪತ್ರಿಕೆಯಲ್ಲಿ ಪ್ರಬಂಧ ಬರಹ, ಸಾರಾಂಶ ಬರಹ ಮತ್ತು ಭಾಷಾಂತರ ಪ್ರಶ್ನೆಗಳು ಇರುತ್ತವೆ. ಪ್ರಬಂಧ ಬರಹದಲ್ಲಿ 600 ಶಬ್ದಗಳ ಮಿತಿಯನ್ನು ಮೀರಬಾರದು. ಪ್ರಬಂಧದ ಜೊತೆ ಸಾರಾಂಶ ಬರಹ ಪ್ರಶ್ನೆಯನ್ನೂ ಕೊಡಲಾಗುವುದು. ಅಭ್ಯರ್ಥಿಗಳು ಕೊಡಲಾಗಿರುವ ಉತ್ತರ ಪತ್ರಿಕೆಯಲ್ಲಿ ಉತ್ತರಿಸತಕ್ಕದ್ದು, ಹೆಚ್ಚುವರಿ ಉತ್ತರ ಪತ್ರಿಕೆಗಳನ್ನು ಕೊಡಲಾಗುವುದಿಲ್ಲ. ಈ ಪರೀಕ್ಷೆಯ ಅವಧಿ 1 ಗಂಟೆ 30 ನಿಮಿಷಗಳು. (20 ಅಂಕಗಳು ಪ್ರಬಂಧಕ್ಕೆ, 10 ಅಂಕಗಳು ಸಾರಾಂಶ ಬರಹಕ್ಕೆ ಮತ್ತು 20 ಅಂಕಗಳು ಕನ್ನಡದಿಂದ ಇಂಗ್ಲಿಷ್‌ಗೆ ಹಾಗೂ ಇಂಗ್ಲಿಷ್‌ನಿಂದ ಕನ್ನಡ ಭಾಷಾಂತರಕ್ಕೆ) ಇದರಲ್ಲಿ ಕನಿಷ್ಠ ಅಂಕಗಳು ಇರುವುದಿಲ್ಲ.

ಪತ್ರಿಕೆ-2
ಸಾಮಾನ್ಯ ಜ್ಞಾನ ಬಹುಆಯ್ಕೆ ಪ್ರಶ್ನೆ ಪತ್ರಿಕೆ
ಪತ್ರಿಕೆ-2 ಪ್ರಶ್ನೆಪತ್ರಿಕೆಯು ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿರುತ್ತದೆ. 150 ಅಂಕಗಳಿಗೆ ವಸ್ತುನಿಷ್ಠ (Objective Multiple choice) ಮಾದರಿಯದಾಗಿದ್ದು, ಬಹುವಿಧ ಆಯ್ಕೆ ಉತ್ತರಗಳ ಲಿಖಿತ ಪರೀಕ್ಷೆ ಇರುತ್ತದೆ. ಇವುಗಳನ್ನು ಉತ್ತರಿಸಲು 1 ಗಂಟೆ 30 ನಿಮಿಷ ಸಮಯ ನೀಡಲಾಗುತ್ತದೆ. ಪತ್ರಿಕೆ-2 ಪ್ರಶ್ನೆ ಪತ್ರಿಕೆಯಲ್ಲಿ ಅಭ್ಯರ್ಥಿಯ ಮಾನಸಿಕ ಸಾಮರ್ಥ್ಯವನ್ನು ಅಳೆಯಲಾಗುವುದು.  ಪ್ರಚಲಿತ ವಿದ್ಯಮಾನಗಳು, ಸಾಮಾನ್ಯ ಜ್ಞಾನವನ್ನೊಳಗೊಂಡ ಸಾಮಾನ್ಯ ಅಧ್ಯಯನ, ಭಾರತದ ಸ್ವಾತಂತ್ರ್ಯ ಸಂಗ್ರಾಮ, ಭಾರತೀಯ ಸಂವಿಧಾನ, ಇತಿಹಾಸ, ಭೂಗೋಳ, ವಿಜ್ಞಾನ, ಕಲೆ, ಸಾಹಿತ್ಯ, ಮಾನಸಿಕ ಸಾಮರ್ಥ್ಯ ಮತ್ತು ನೀತಿ ಶಿಕ್ಷಣ ಇತ್ಯಾದಿಗಳ ಬಗ್ಗೆ ಪ್ರಶ್ನೆಗಳು ಇರುತ್ತವೆ.

 = ಪ್ರತಿ ತಪ್ಪು ಉತ್ತರಕ್ಕೆ ಅಂತಹುದೇ ಪ್ರಶ್ನೆಯ ಸರಿ ಉತ್ತರದ ಶೇ 25 (0.375) ರಷ್ಟು ಅಂಕಗಳನ್ನು ಕಳೆಯಲಾಗುವುದು.

 = ಅಭ್ಯರ್ಥಿಗಳು ಎರಡು ಪತ್ರಿಕೆಗಳಿಗೂ ಹಾಜರಾಗುವುದು ಕಡ್ಡಾಯವಾಗಿರುತ್ತದೆ.

Civil PSI Syllabus Pdf Download : Click Here

 

KSRP PSI Syllabus Pdf Download : Click Here

 

CAR/DAR ARMED RESERVE PSI Syllabus Pdf Download : Click Here

 

KSISF PSI Syllabus Pdf Download : Click Here

«
»

Leave a Reply

Your email address will not be published. Required fields are marked *

*
*