ಇದೀಗ ತಾನೇ ಹತ್ತನೇ ತರಗತಿಯ ಫಲಿತಾಂಶವನ್ನು ಕರ್ನಾಟಕ ಶಿಕ್ಷಣ ಮಂಡಳಿಯು ಬಿಡುಗಡೆ ಮಾಡಿದ್ದು ಹಲವಾರು ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸಿದ್ದಾರೆ.
10ನೇ ತರಗತಿ ಏನೊ ಪಾಸ್ ಆಗಿದ್ದಾರೆ ಆದರೆ ಹಲವು ವಿದ್ಯಾರ್ಥಿಗಳಿಗೆ ಕಾಡುವುದೇನೆಂದರೆ ಮುಂದೆ ಏನು ಮಾಡಬೇಕು ಮತ್ತು ಯಾವ ವಿಷಯದಲ್ಲಿ ಶಿಕ್ಷಣವನ್ನು ಮುಂದುವರಿಸಬೇಕೆಂಬುದು ಅತಿ ದೊಡ್ಡ ಸವಾಲ್ ಆಗಿರುತ್ತದೆ.
ಇಂತಹ ಈ ವಿದ್ಯಾರ್ಥಿಗಳಿಗೆ ನಾವು ಈ ಲೇಖನದಲ್ಲಿ ಉತ್ತಮ ಸಲಹೆ ಮತ್ತು ಮಾರ್ಗಗಳನ್ನು ನೀಡಿದ್ದು ಈ ಒಂದು ಲೇಖನವು ಹಲವಾರು ವಿದ್ಯಾರ್ಥಿಗಳಿಗೆ ಸಹಾಯವಾಗಲಿದೆ.
10ನೇ ತರಗತಿಯ ನಂತರ ಯಾವ ಕೋರ್ಸುಗಳು ಲಭ್ಯವಿವೆ, ಈಗಿನ ಸಮಯದಲ್ಲಿ ಯಾವ ಕೋರ್ಸ್ ಮಾಡಿದರೆ ಉತ್ತಮ ಎಂಬ ಹಲವಾರು ವಿಷಯಗಳನ್ನು ಈ ಒಂದು ಲೇಖನದಲ್ಲಿ ಚರ್ಚಿಸಲಾಗಿದೆ.
ಎಲ್ಲರಿಗೂ ನಮಸ್ಕಾರ ಆತ್ಮೀಯ ಬಂಧುಗಳೇ. ನಮ್ಮ ಈ ಜಾಲತಾಣದಲ್ಲಿ ನಾವು ಜನತೆ ವಿದ್ಯಾರ್ಥಿಗಳಿಗೆ, ರೈತರಿಗೆ ಹಾಗೂ ಉದ್ಯೋಗ ಆಕಾಂಕ್ಷಿಗಳಿಗೆ ಹಾಗೂ ಹಲವಾರು ಸಾರ್ವಜನಿಕರಿಗೆ ಉಪಯುಕ್ತವಾಗುವಂತ ಸರ್ಕಾರಿ ಯೋಜನೆಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಹಾಗೂ ಸರ್ಕಾರಿ ಉದ್ಯೋಗಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ದಿನನಿತ್ಯ ನೀಡುತ್ತಿದ್ದೇವೆ.
ಪ್ರತಿನಿತ್ಯ ಉಪಯುಕ್ತವಾಗುವಂತ ಮಾಹಿತಿಗಳನ್ನು ನೀಡುತ್ತಿದ್ದು ಇಂದಿನ ಈ ಲೇಖನದಲ್ಲಿ ನಾವು 10ನೇ ತರಗತಿ ಪಲಿತಾಂಶ ಬಂದ ಬಳಿಕ ಅಭ್ಯರ್ಥಿಗಳಿಗೆ ಹತ್ತನೇ ತರಗತಿಯ ನಂತರ ಏನು ಮಾಡಬೇಕೆಂಬುವುದು ದೊಡ್ಡ ಸವಾಲಾಗಿರುತ್ತದೆ.
ಈ ಒಂದು ಸವಾಲಿಗೆ ಸಹಾಯವಾಗುವಂತೆ ನಾವು ಹಲವಾರು ವಿಷಯಗಳನ್ನು ಮತ್ತು ಮಾರ್ಗಗಳನ್ನು ಈ ಒಂದು ಲೇಖನದಲ್ಲಿ ಚರ್ಚಿಸಿದ್ದೇವೆ. ಈ ಒಂದು ಲೇಖನವನ್ನು ವಿದ್ಯಾರ್ಥಿಗಳು ಕೊನೆಯ ಭಾಗದವರೆಗೂ ಓದಿ ಉತ್ತಮ ಸಲಹೆ ಮತ್ತು ಮಾರ್ಗಗಳನ್ನು ತಿಳಿದುಕೊಂಡು ನಿಮ್ಮ ಮುಂದಿನ ಜೀವನದ ಭವಿಷ್ಯವನ್ನು ಉತ್ತಮವಾಗಿಸಿಕೊಳ್ಳಿ ಎಂದು ನಾವು ನಿಮ್ಮಲ್ಲಿ ಕೇಳಿಕೊಳ್ಳುತ್ತೇವೆ.
ಅದೇ ರೀತಿ ಈ ಒಂದು ಮಾಹಿತಿಯು ನಿಮಗೆ ಉಪಯುಕ್ತವೆನಿಸಿದರೆ ನಿಮ್ಮ ಎಲ್ಲಾ ಸ್ನೇಹಿತ ಬಾಂಧವರಿಗೂ ಹಾಗೂ ಕುಟುಂಬ ಬಾಂಧವರಿಗೂ ಹಾಗೂ ಎಲ್ಲಾ ನಿಮ್ಮ ಹಿತೈಷಿಗಳಿಗೂ ಈ ಒಂದು ಲೇಖನವನ್ನು ಅವರಿಗೂ ಹಂಚಿಕೊಂಡು ಪ್ರತಿಯೊಬ್ಬರಿಗೂ ಸಹಾಯ ಆಗುವಂತೆ ಸಹಾಯ ಮಾಡಿ.
SSLC ನಂತರ ಮುಂದೇನು ಮಾಡಬೇಕು?
ಹಲವಾರು ವಿದ್ಯಾರ್ಥಿಗಳು 10ನೇ ತರಗತಿಯಲ್ಲಿ ಕಷ್ಟಪಟ್ಟು ಅಭ್ಯಾಸ ಮಾಡಿ ಉತ್ತಮ ಅಂಕಗಳನ್ನ ಗಳಿಸುತ್ತಾರೆ. ಆದರೆ ಹಲವಾರು ವಿದ್ಯಾರ್ಥಿಗಳಿಗೆ ಕಾಡುವ ಪ್ರಶ್ನೆ ಎಂದರೆ ಮುಂದೆ ಏನು ಮಾಡಬೇಕು? ವಿದ್ಯಾರ್ಥಿಗಳೆ, 10ನೇ ತರಗತಿ ಮುಗಿದ ನಂತರ ನೀವು ಏನು ಮಾಡಬೇಕೆಂಬುದನ್ನು ನೀವು ನಿರ್ಧರಿಸುವ ಮೊದಲು ಮುಂದೆ ನೀವು ಏನಾಗಬೇಕೆಂಬುದನ್ನು ಯೋಚಿಸಿ.
ಉದಾಹರಣೆಗೆ ನೀವು ಡಾಕ್ಟರ್ ಆಗಬೇಕೆಂದು ಕನಸನ್ನು ಕಟ್ಟಿಕೊಂಡಿದ್ದರೆ ಪಿಯುಸಿಯನ್ನು ವಿಜ್ಞಾನ ವಿಷಯದಲ್ಲಿ ಮುಗಿಸಿ ನಂತರ ನೀವು ಮುಂದುವರೆಯಬಹುದು. ವಿಜ್ಞಾನ ವಿಷಯದಲ್ಲಿ ಪ್ರಮುಖವಾಗಿ ನೀವು ರಸಾಯನಶಾಸ್ತ್ರ, ಭೌತಶಾಸ್ತ್ರ ಹಾಗೂ ಜೀವಶಾಸ್ತ್ರ ವಿಷಯಗಳನ್ನು ತೆಗೆದುಕೊಂಡು ಪಿಯುಸಿಯನ್ನು ಮುಗಿಸಬಹುದು.
ಡಾಕ್ಟರ್ ಆಗಬೇಕೆಂಬ ಕನಸು ಹೊತ್ತವರಿಗೆ ದ್ವಿತೀಯ ಪಿಯುಸಿ ವಿಜ್ಞಾನ ವಿಷಯದಲ್ಲಿ PCB ವಿಷಯಗಳೊಂದಿಗೆ ಮುಂದುವರೆಯುವುದು ಉತ್ತಮವಾಗಿದೆ. ಅದೇ ಒಂದು ವೇಳೆ ನೀವು ದೊಡ್ಡ ಇಂಜಿನಿಯರ್ ಆಗಬೇಕೆಂಬ ಕನಸು ಹೊತ್ತಿದ್ದರೆ ವಿಜ್ಞಾನ ವಿಷಯದಲ್ಲಿ ಗಣಿತ ವಿಷಯವನ್ನು ಪಡೆದುಕೊಳ್ಳಬೇಕು.
ಅದೇ ಒಂದು ವೇಳೆ ನೀವು ಸಾಫ್ಟ್ ವೇರ್ ವಿಷಯದಲ್ಲಿ ಮುಂದೆ ಇಂಜಿನಿಯರಿಂಗ್ ಮಾಡಬೇಕೆಂಬ ಕನಸನ್ನು ಹೊತ್ತಿದ್ದರೆ ಫಿಸಿಕ್ಸ್, ಕೆಮಿಸ್ಟ್ರಿ ಹಾಗೂ ಗಣಿತ ವಿಷಯದೊಂದಿಗೆ ನೀವು ಕಂಪ್ಯೂಟರ್ ಸೈನ್ಸ್ ವಿಷಯವನ್ನು ತೆಗೆದುಕೊಂಡರೆ ಬಹಳ ಉತ್ತಮ.
ಏಕೆಂದರೆ ನೀವು ಇಂಜಿನಿಯರಿಂಗ್ ಮಾಡುವಾಗ ಕಂಪ್ಯೂಟರ್ ಸೈನ್ಸ್ ಅತಿ ಮುಖ್ಯವಾದ ಪಾತ್ರವನ್ನು ವಹಿಸುವುದರಿಂದ ಪಿಯುಸಿಯಲ್ಲಿ ನೀವು ಕಂಪ್ಯೂಟರ್ ಸೈನ್ಸ್ ವಿಷಯವನ್ನು ಓದಿದರೆ ನಿಮಗೆ ಇಂಜಿನಿಯರಿಂಗ್ ನಲ್ಲಿ ಅತಿ ಸುಲಭವಾದ ವಿಷಯವಾಗಲಿದೆ.
PUC ಹೊರತುಪಡಿಸಿ ಮತ್ತ್ಯಾವ ಆಯ್ಕೆಗಳಿವೆ?
ವಿದ್ಯಾರ್ಥಿಗಳೇ, 10ನೇ ತರಗತಿ ಪಾಸಾದ ನಂತರ ಕೇವಲ ಪಿಯುಸಿ ಒಂದೇ ಆಯ್ಕೆಯನ್ನು ಹೊರತುಪಡಿಸಿ ಜೀವನದಲ್ಲಿ ಮುಂದುವರೆಯಲು ಹಲವಾರು ಆಯ್ಕೆಗಳಿವೆ.
ಉದಾಹರಣೆಗೆ,ಒಂದು ವೇಳೆ ನೀವು ಇಂಜಿನಿಯರಿಂಗ್ ವಿಭಾಗಗಳಾದ ಸಿವಿಲ್ ಮೆಕಾನಿಕಲ್ ಅಥವಾ ಇತರೆ ವಿಭಾಗಗಳಲ್ಲಿ ಇಂಜಿನಿಯರಿಂಗ್ ವಿಷಯವನ್ನು ತೆಗೆದುಕೊಳ್ಳುವುದಾದರೆ 10ನೇ ತರಗತಿ ಪಾಸಾದ ನಂತರ ನೀವು ಡಿಪ್ಲೋಮಾ ಇನ್ ಇಂಜಿನಿಯರಿಂಗ್ ಪದವಿ ಮುಗಿಸುವುದು ಅತಿ ಉಪಯುಕ್ತ.
ಏಕೆಂದರೆ ನೀವು ಡಿಪ್ಲೋಮಾ ಓದಿದರೆ ನಿಮಗೆ ಇಂಜಿನಿಯರಿಂಗ್ ಶಿಕ್ಷಣದ ಎಲ್ಲಾ ಬೇಸಿಕ್ ಜ್ಞಾನವನ್ನು ಡಿಪ್ಲೋಮಾದಲ್ಲಿ ನೀವು ಪಡೆದುಕೊಳ್ಳುವುದರಿಂದ ಇಂಜಿನಿಯರಿಂಗ್ ಪದವಿಯನ್ನು ನೀವು ಸುಲಭವಾಗಿ ಅದರಲ್ಲಿ ಪಂಡಿತರಾಗುವುದು ಸಾಧ್ಯವಿದೆ.
ಡಿಪ್ಲೋಮವನ್ನು ಹೊರತುಪಡಿಸಿ ತಾಂತ್ರಿಕ ವಿಷಯಗಳನ್ನು ಓದಿಕೊಂಡು ಜಲ್ದಿ ಕೆಲಸವನ್ನು ನೀವು ಗಿಟ್ಟಿಸಿಕೊಳ್ಳಲು ಬಯಸುವುದಾದರೆ ಎಸ್ ಎಸ್ ಎಲ್ ಸಿ ನಂತರ ITI ಕೋರ್ಸ್ ನಿಮಗೆ ಒಂದು ಉತ್ತಮ ಆಯ್ಕೆಯಾಗಿದೆ. ನಿಮಗೆ ಗೊತ್ತಿರುವ ಹಾಗೆ ಐಟಿಐ ನೀವು ಮುಗಿಸಿದರೆ ನಿಮಗೆ ಮುಂದೆ ದೊಡ್ಡ ದೊಡ್ಡ ಕಂಪನಿಗಳಲ್ಲಿ ಜಾಬ್ ಗಳನ್ನು ಮಾಡುವ ಅವಕಾಶ ದೊರೆಯಲಿದೆ.
UPSC ಕನಸು ಇದೆಯಾ? ಜಿಲ್ಲಾಧಿಕಾರಿ ಆಗುವ ಕನಸಿದೆಯಾ? ಇಲ್ಲಿದೆ ಮುಖ್ಯ ಸಲಹೆ :
ಹಲವಾರು ವಿದ್ಯಾರ್ಥಿಗಳು ತಾವು ಸಣ್ಣವರಿದ್ದಾಗಿನಿಂದಲೇ ನಾನು ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಬೇಕು, ದೇಶದ ಸೇವೆ ಸಲ್ಲಿಸಬೇಕು ಸಮಾಜದ ಜನರಿಗೆ ನನ್ನ ಕಡೆಯಿಂದ ಸಹಾಯ ಆಗಬೇಕು ಎಂಬ ಹಲವಾರು ಕನಸುಗಳನ್ನು ಹೊತ್ತಿರುವ ವಿದ್ಯಾರ್ಥಿಗಳಿಗೆ ಯುಪಿಎಸ್ಸಿ ಪರೀಕ್ಷೆಯನ್ನು ಪಾಸು ಮಾಡಲು ಇಲ್ಲಿ ಕೆಲವೊಂದಿಷ್ಟು ಸಲಹೆಗಳನ್ನು ನೀಡಿರುತ್ತೇವೆ.
ಒಂದು ವೇಳೆ ನೀವು ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಬೇಕು ಅಥವಾ ಉನ್ನತ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಬೇಕು ಎಂಬ ಕನಸನ್ನು ಹೊಂದಿದ್ದರೆ ಹತ್ತನೇ ತರಗತಿಯ ಮುಗಿದ ನಂತರ ನೀವು ಸರಿಯಾದ ಒಬ್ಬ ಮಾರ್ಗದರ್ಶಕರನ್ನು ಹುಡುಕಿಕೊಂಡು ಅವರ ಸಹಾಯವನ್ನು ತೆಗೆದುಕೊಂಡು ಪಿಯುಸಿ ಎಂದರೆ ಲೋಕಸೇವಾ ಆಯೋಗ ಪರೀಕ್ಷೆಗೆ ತಯಾರಿ ನಡೆಸುವುದು ಒಂದು ಉತ್ತಮ ಆಯ್ಕೆಯಾಗಿದೆ.
ಹಲವಾರು ವಿದ್ಯಾರ್ಥಿಗಳು ಯಾವ ತಪ್ಪು ಮಾಡುತ್ತಾರೆ ಎಂದರೆ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸುವುದನ್ನು ತಮ್ಮ ಪದವಿ ಶಿಕ್ಷಣ ಮುಗಿದ ನಂತರ ಆರಂಭಿಸುತ್ತಾರೆ.
ಆದರೆ ಇವರು ಇದು ಒಂದು ಮಾಡುವ ದೊಡ್ಡ ತಪ್ಪು ಎಂದು ನಾವು ಹೇಳುತ್ತೇವೆ ಏಕೆಂದರೆ ಒಂದು ವೇಳೆ ನಿಮ್ಮ ಕನಸು ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಬೇಕೆಂಬುದೇ ದೊಡ್ಡ ಕನಸಾಗಿದ್ದರೆ ಯಾಕೆ ನೀವು ಈಗಿನಿಂದಲೇ ತಯಾರಿ ಆರಂಭಿಸಬಾರದು? ಬಂಧುಗಳೇ ನಿಮಗೆ ನಾವು ನೀಡುವ ಸಲಹೆ ಏನೆಂದರೆ ನಿಮ್ಮದು ಯುಪಿಎಸ್ಸಿ ಪರೀಕ್ಷೆಯನ್ನು ಪಾಸು ಮಾಡಬೇಕೆಂಬುದೇ ನಿಮ್ಮ ಕನಸಾಗಿದ್ದರೆ ನೀವು ಮೊದಲು ಒಬ್ಬ ಮಾರ್ಗದರ್ಶಕರನ್ನು ಹುಡುಕಿಕೊಂಡು ಅವರ ಮಾರ್ಗದರ್ಶನದಂತೆಯೇ ಈಗಿನಿಂದಲೇ ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷೆಗೆ ತಯಾರಿ ನಡೆಸುವುದು ಒಂದು ಉತ್ತಮ ಆಯ್ಕೆಯಾಗಿದೆ.
ಭಾರತೀಯ ಸೇನೆಯಲ್ಲಿ ಸೇರಬೇಕಾ? ಹೇಗೆ ಭಾರತೀಯ ಸೇನೆಯನ್ನು ಸೇರಿ ದೇಶ ಸೇವೆ ಸಲ್ಲಿಸಬೇಕು?
Indian Army – ಇಂದಿನ ಯುವ ಪೀಳಿಗೆಯ ಹಲವಾರು ಅಭ್ಯರ್ಥಿಗಳು ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸಬೇಕು ಅಥವಾ ದೇಶ ಸೇವೆ ಸಲ್ಲಿಸಬೇಕು ಎಂಬುದನ್ನು ಆಸೆ ಹೊಂದಿರುತ್ತಾರೆ.
ಇಂತಹ ವಿದ್ಯಾರ್ಥಿಗಳು ತಮ್ಮ ಪಿಯುಸಿ ಅಧ್ಯಯನದ ಜೊತೆಗೆ ಕೇಂದ್ರ ಲೋಕಸೇವಾ ಆಯೋಗವು ನಡೆಸುವ NDA / NA ಪರೀಕ್ಷೆಗಳಿಗೆ ತಯಾರಿ ನಡೆಸುವುದು ಉತ್ತಮ ಮಾರ್ಗವಾಗಿದೆ.
ಪಿಯುಸಿ ಮುಗಿದ ತಕ್ಷಣವೇ ಅಥವಾ ದ್ವಿತೀಯ ಪಿಯುಸಿ ಓದುವ ಸಮಯದಲ್ಲಿ ವಿದ್ಯಾರ್ಥಿಗಳಿಗೆ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಪರೀಕ್ಷೆ ಬರೆಯಲು ಅವಕಾಶವಿರುತ್ತದೆ. ಇಂತಹ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಶಿಕ್ಷಣದಲ್ಲಿ ವಿಜ್ಞಾನ ವಿಷಯವನ್ನು ತೆಗೆದುಕೊಂಡು ಗಣಿತ ವಿಷಯವನ್ನು ಸರಿಯಾಗಿ ಅಧ್ಯಯನ ಮಾಡಬೇಕು.
ಎಂದರೆ ಈ ಒಂದು ಪರೀಕ್ಷೆಯಲ್ಲಿ ಪ್ರಮುಖವಾಗಿ ಗಣಿತ ರಸಾಯನಶಾಸ್ತ್ರ ಹಾಗೂ ಭೌತಶಾಸ್ತ್ರ ವಿಷಯಗಳು ಪ್ರಮುಖವಾಗಿರುತ್ತದೆ.
ಈ ಒಂದು ವಿಷಯಗಳಲ್ಲಿ ನೀವು ಪಿಯುಸಿ ಅಧ್ಯಯನದ ಜೊತೆಗೆ ಈ ಒಂದು ವಿಷಯಗಳನ್ನು ಸರಿಯಾಗಿ ನೀವು ತಯಾರಿ ಮಾಡಿಕೊಳ್ಳುವುದಾದರೆ ಸುಲಭವಾಗಿ ನೀವು ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ ಪರೀಕ್ಷೆಯನ್ನು ಕ್ಲಿಯರ್ ಮಾಡಿಕೊಳ್ಳಬಹುದು.
ಈ ಒಂದು ಪರೀಕ್ಷೆಯನ್ನು ನೀವು ಕ್ಲಿಯರ್ ಮಾಡಿದರೆ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಸೇರಿ ಅಲ್ಲಿ ನೀವು ಪದವಿ ಶಿಕ್ಷಣವನ್ನು ಮುಗಿಸಿ ನಂತರ ನೇರವಾಗಿ ಇಂಡಿಯನ್ ಆರ್ಮಿಗೆ ಜಾಯಿನ್ ಆಗಬಹುದು.
ಇವುಗಳನ್ನು ಹೊರತುಪಡಿಸಿ ನೀವು ಅಗ್ನಿ ವೀರರು ಆಗಲು ಕೂಡ ಅವಕಾಶವಿದೆ.
ಪಿಯುಸಿ ಮುಗಿಸಿದ ನಂತರ ಅರ್ಜಿ ಕರೆದಾಗ ಈ ಒಂದು ನೇಮಕಾತಿಗೆ ಅರ್ಜಿ ಸಲ್ಲಿಸಿ ಈ ಪರೀಕ್ಷೆಗೆ ಸರಿಯಾಗಿ ತಯಾರಿ ನಡೆಸಿ ಹಾಗೂ ದೈಹಿಕ ಪರೀಕ್ಷೆಗೆ ತಯಾರಿ ನಡೆಸಿಕೊಂಡು ಈ ಒಂದು ಪರೀಕ್ಷೆಯನ್ನು ಪಾಸಾಗುವುದರ ಮುಖಾಂತರ ನೀವು ಭಾರತೀಯ ಸೇನೆಗೆ ಸೇರಬಹುದಾಗಿದೆ.
ಸ್ನೇಹಿತರೆ ನಿಮಗೆ 10ನೇ ತರಗತಿ ನಂತರ ತೆಗೆದುಕೊಳ್ಳಬಹುದಾದ ಕೆಲವು ವಿಷಯಗಳ ಬಗ್ಗೆ ಇಲ್ಲಿ ಚರ್ಚಿಸಿದ್ದೇವೆ. ಇನ್ನೂ ಹೆಚ್ಚಿನ ಅವಕಾಶಗಳ ಬಗ್ಗೆ ನಾವು ನಿಮಗೆ ಮುಂದಿನ ಲೇಖನದಲ್ಲಿ ತಿಳಿಸಲಿದ್ದೇವೆ.
ಈ ಮಾಹಿತಿಯು ನಿಮಗೆ ಉಪಯುಕ್ತ ಅನಿಸಿದರೆ ನಿಮ್ಮ ಎಲ್ಲಾ ಹಿತೈಷಿಗಳಿಗೂ ಈ ಮಾಹಿತಿಯನ್ನು ಶೇರ್ ಮಾಡುವುದರ ಮುಖಾಂತರ ಎಲ್ಲರಿಗೂ ಈ ಮಾಹಿತಿ ತಲುಪುವಂತೆ ಮಾಡಿ ಧನ್ಯವಾದಗಳು.
ನೋಡಿ ನೀವು ಸದ್ಯ ಹತ್ತನೇ ತರಗತಿ ಮುಗಿಸಿದ್ದರೆ ಮುಂದೆ ಹಲವಾರು ಕೋರ್ಸ್ ಗಳಿವೆ ನಿಮಗೆ ಇಂದಿನ ಈ ಲೇಖನ ಕೇವಲ ನಾವು ಇನ್ಫಾರ್ಮಶನ್ ಗೆ ಮಾತ್ರ ನೀಡುತ್ತಿದ್ದು ನೀವು ನಿಮ್ಮ ಜೀವನದ ಮುಂದಿನ ಘಟ್ಟವನ್ನು ನೀವೇ ಆಯ್ಕೆ ಮಾಡಿ ಕೊಡಬೇಕಾಗುತ್ತದೆ ನೀವು ಒಂದು ಸಾರಿ ಬಿಟ್ಟು ನಾಲ್ಕೈದು ಬಾರಿ ನಿಮ್ಮ ದೊಡ್ಡವರಿಗೆ ಕೇಳಿ ಅಂದರೆ ನಿಮ್ಮ ಅಣ್ಣಂದಿರಿಗೆ ಅಕ್ಕಂದಿರಿಗೆ ನಿಮ್ಮ ಸರ್ ಟೀಚರ್ ಕೆಳಗೆ ಕೇಳಿದ ನಂತರವೇ ಮುಂದಿನ ನಿರ್ಧಾರ ಕೈಗೊಳ್ಳಿ.
ನೀವು ಕೂಡ ಎಸ್ ಎಲ್ ಸಿ ಮುಗಿಸಿದರೆ ಮುಂದೆ ಯಾವ ಸ್ಟೇಂಗೆ ಮಾಡಿಕೊಳ್ಳಬೇಕು ಹಾಗೂ ಯಾವ ಸ್ಟೀಮ್ ನಲ್ಲಿ ಅತಿ ಹೆಚ್ಚು ಸೌಲಭ್ಯಗಳಿವೆ. ಇದರಿಂದ ನಮ್ಮ ಜೀವನ ನಡೆಯುತ್ತಾ ಎಂಬುದನ್ನ ಅರ್ಥ ಮಾಡಿಕೊಳ್ಳಿ ನಾವು ಯಾವ ಕೋರ್ಸ್ ಮಾಡಿದರೆ ಮುಂದೆ ನಮಗೆ ಜೀವನಕ್ಕೆ ಸಹಾಯ ಆಗುತ್ತೆ ಎಂದು ಅರ್ಥ ಮಾಡಿಕೊಂಡ ನಂತರವೇ ನೀವು ಕೂಡ ಆಯ್ಕೆ ಮಾಡಿಕೊಳ್ಳಿ ಮಾಡಿಕೊಳ್ಳಿ.
ಇಲ್ಲಿವರೆಗೆ ಈ ಲೇಖನ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮಗೆ ಇದೇ ರೀತಿ ಮಾಹಿತಿಗಳು ಅಪ್ಡೇಟ್ಗಳು ಬೇಕಾದರೆ ತಪ್ಪದೆ ನಮ್ಮ ವೆಬ್ಸೈಟ್ ಭೇಟಿ ನೀಡಿ ನಾವಿಲ್ಲಿ ನಿಮಗೊಂದು ಇದೆ ರೀತಿ ಮಾಹಿತಿಗಳನ್ನು ನೀಡುತ್ತೇವೆ
ಇಷ್ಟೆಲ್ಲ ಅತ್ತಿ ಮುಖ್ಯವಾಗಿ ನಾವು ಉದ್ಯೋಗದ ಬಗ್ಗೆ ಮಾಹಿತಿ ನೀಡುತ್ತೇವೆ ನಿಮಗೂ ಕೂಡ ಉದ್ಯೋಗ ಪಡೆದುಕೊಳ್ಳಬೇಕು ಎಂದು ಹಂಬಲ ಇದ್ದರೆ ತಪ್ಪದೇ ನಮ್ಮ ಕನ್ನಡ ಜಾಬ್ಸ್ ಡಾಟ್ ಕಾಮ್ ವೆಬ್ಸೈಟ್ಗೆ ಪ್ರತಿದಿನ ಭೇಟಿ ನೀಡಿ.
ಕೊನೆದಾಗಿ ಇಲ್ಲಿಯವರೆಗೆ ಈ ಲೇಖನ ಓದಿದ್ದಕ್ಕೆ ನಿಮ್ ಮನೆಗೆ ಧನ್ಯವಾದಗಳು ನಿಮಗೂ ಕೂಡ ಸಹಾಯವಾಗಿದ್ದರೆ ನಿಮ್ಮ ಎಸೆಸೆಲ್ಸಿ ಮುಗಿಸಿರುವಂತ ಸ್ನೇಹಿತ ಸ್ನೇಹಿತರಿಗೆ ತಪ್ಪದೇ ಶೇರ್ ಮಾಡಿ ಅವರಿಗೂ ಕೂಡ ಬಹಳ ಸಹಾಯಕಾರಿ ಆಗುತ್ತೆ ಧನ್ಯವಾದಗಳು.
FAQ
SSLC ಮುಗಿದ ನಂತರ ಯಾವ ಫೀಲ್ಡ್ ಗಳಿವೆ..?
ಆರ್ಟ್ಸ್ ಮತ್ತು ಕಾಮರ್ಸ್ ಮತ್ತು ಸೈನ್ಸ್
ಹತ್ತನೇ ತರಗತಿ ಮುಗಿದ ನಂತರ ಯಾವುದು ಬೆಸ್ಟ್ ಕೋರ್ಸ್..?
ನೋಡಿ ಇದಕ್ಕೆ ನೀವು ನಿಮ್ಮ ಶಿಕ್ಷಕರ ಹಾಗೂ ನಿಮ್ಮ ಅಣ್ಣಂದಿರ ಅಥವಾ ನಿಮ್ಮ ಅಕ್ಕಂದಿರ ಸಹಾಯವನ್ನು ಪಡೆದುಕೊಳ್ಳಿ ಏಕೆಂದರೆ ಅವರು ಎಲ್ಲವನ್ನ ಕಲಿತೆ ಮುಂದು ಹೋಗಿರುತ್ತಾರೆ, ಫ್ಯೂಚರ್ ಬಗ್ಗೆ ಯಾವ ಪ್ಲಾನ್ಗಳಿವೆ ಅಂದರೆ ನೀವು ಓದಿದರೆ ಅದರಿಂದಾಗುವ ಪ್ರಯೋಜನಗಳೇನು ಮುಂದೆ ಅದರಿಂದ ನಮಗೆ ಜಾಬ್ ಸಿಗುತ್ತಾ ಅಥವಾ ಸಿಗೋದಿಲ್ಲ ಎಂದು ಸರಿಯಾಗಿ ಗಮನಿಸಿ ನಂತರವೇ ಆಯ್ಕೆ ನಿಮ್ಮದಾಗಿರುತ್ತದೆ.